ಕನ್ನಡ ಸ್ವರಚಕ್ರ



ವಿವರಣೆ

"ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ!"-ಕುವೆಂಪು. If your device can display this sentence in Kannada perfectly, then your device supports Kannada and Swarachakra should also work well. If you do not see any text, or if some of the words are incorrect, Swarachakra may not work well.

ಸ್ವರಚಕ್ರ ಕನ್ನಡ' ಒಂದು ಟಚ್-ಸ್ಕ್ರೀನ್ ಕೀಬೋರ್ಡ್. ಸ್ವರಚಕ್ರ ಹಿಂದಿ, ಮರಾಠಿ, ಗುಜರಾತಿ, ತೆಲುಗು, ಮಲಯಾಳಂ, ಒಡಿಯಾ, ಪಂಜಾಬೀ ಮತ್ತು ಬೆಂಗಾಲಿ ಭಾಷೆಗಳ್ಲಲ್ಲೂ ದೊರಕುತ್ತದೆ ಸ್ವರಚಕ್ರದಲ್ಲಿ ಕನ್ನಡ ಸ್ಕ್ರಿಪ್ತಿಗೆ ತಕ್ಕಂತೆ ತಾರ್ಕಿಕ ವಿನ್ಯಾಸ ಉಪಯೋಗಿಸಲಾಗಿದೆ. ಇದರಲ್ಲಿ ವ್ಯಂಜನಗಳನ್ನು ಕನ್ನಡ ಸ್ಕ್ರಿಪ್ತಿನ ತಾರ್ಕಿಕ ರಚನೆಗೆ ತಕ್ಕಂತೆ, ಉಚ್ಚಾರಣೆಗೆ ತಕ್ಕಂತೆ ಒಂದು ಗ್ರಿಡ್ ಅಲ್ಲಿ ಗುಂಪಾಗಿ, ಶಾಲೆಯ ಪುಸ್ತಕಾಗಲ್ಲಿ ಇದ್ದಂತೆ ಪ್ರದರ್ಶಿಸಲಾಗಿದೆ.


ಸ್ವರಚಕ್ರದಲ್ಲಿ ಟೈಪಿಂಗ್

ಕನ್ನಡ ಬರೆಯಬೇಕಾದರೆ ಬಹಳಷ್ತು ಸರಿ ವ್ಯಂಜನಗಳು ಮತ್ತು ಮಾತ್ರಗಳ ಸಂಯೋಗವನ್ನು ಬಳಸುತ್ತೇವೆ. ಸ್ಕ್ರೀನಿನ ಮೇಲೆ ಯಾವುದೇ ವ್ಯಂಜನ ಮುಟ್ಟಿದರೆ ಒಂದು ಚಕ್ರ ಕಾಣಿಸುತ್ತದೆ. ಅದರಲ್ಲಿ ಆಗ್ಗಾಗೆ ಬಳಕೆ ಆಗುವ ೧೦ ವ್ಯಂಜನ ಮತ್ತು ಮಾತ್ರಗಳ ಸಂಯೋಗ ಸಿಗುತ್ತದೇ. ಉದಾಹರಣೆಗೆ ವ್ಯಂಜನ 'ಧ' ಗೆ ಮಾತ್ರ ೊ ಇದು ಧ+ೊ=ಧೊ. ಈಗ ಸ್ಕ್ರೀನ್ ಮೇಲೆ 'ಧ' ಸೆಲೆಕ್ಟ್ ಮಾಡಿದರೆ ಧಾ, ಧಿ, ಧೀ, ಧು,ಧೂ, ಧೆ, ಧೇ, ಧೊ, ಧೋ, ಧ್. ಆಮೇಲೆ ಸ್ಟೈಲಸ್ ಅಥವಾ ಬೆರಳಿನಿಂದ ಯಾವುದೇ ಸಂಯೋಗವನ್ನು ಆರಿಸಿಕೊಳ್ಳಬಹುದು

ಬಹಳಷ್ಟು ಜನರಿಗೆ ಕ್ರಿ, ಸ್ಟ,ಚ್ಯ ಇಂತಹ ಸಂಯೋಗಗಲ್ಲನ್ನು ಬರೆಯುವುದು ಕಷ್ಟವಾಗುತ್ತದೆ. ಸ್ವರಚಕ್ರದಿಂದ ಇದು ಸುಲಭವಾಗುತ್ತದೆ.ಸಂಯೋಗದ ಮೊದಲ ಭಾಗ ಆರಿಸಿಕೊಂಡು ಚಕ್ರದಿಂದ ಹಾಲಂತನ್ನು ಆರಿಸಿಕೊಳ್ಳಿ(ಸ+್). ಇದಾದ ನಂತರ ಸ್ವರಚಕ್ರ ಹಲವಾರು ಆಯ್ಕೆಗಳನ್ನು(ಸ+್+ತ=ಸ್ತ; ಸ+್+ಥ=ಸ್ಥ) ನೀಡುತ್ತದೆ. ಇದರಿಂದ ಬೇಕಾದ್ದನ್ನು ಆರಿಸಿಕೊಂಡು ಅದಕ್ಕೆ ಬೇಕಾದರೆ ಮಾತ್ರವನ್ನು(ಸ್ಥಾ, ಸ್ಥಿ, ಸ್ಥೀ, ಸ್ಥು, ಸ್ಥೂ..). ಸಹ ಜೋಡಿಸಬಹುದು ಮುಂಚೆ ವಿವರಿಸಿದಂತೆ.

ರಾಫರ್(ರ್ಥ), ರಾಷ್ಟ್ರಚಿಹ್ನ(ಟ್ರ) ಬರೆಯುವುದ್ದಕೆ ಬಲ ಭಾಗದಲ್ಲಿ ಎಲ್ಲದಕ್ಕಿಂತ ಕೆಳಗಿನ ಭಾಗದಲ್ಲಿರುವ ಕೀ ಗಳಿಂದ ಬೀಕದ್ದನ್ನು ಆರಿಸಿಕೊಂಡು ಟೈಪ್ ಮಾಡಬಹುದು ಎಲ್ಲ ಸ್ವರಗಳು(ಅ, ಆ, ಇ, ಈ, ಉ, ಊ, ಎ, ಏ, ಒ, ಓ) ಇನ್ನೊಂದು ಚಕ್ರದಲ್ಲಿ ಬಲ ಭಾಗದಲ್ಲಿ ಕೆಳಗೆ ಪ್ರದರ್ಶಿಸಲಾಗುತ್ತದೆ. ಅಪರೂಪವಾಗಿ ಬಳಕೆಯಾಗುವ ಸ್ವರಗಳು ಮತ್ತು ಮಾತ್ರಗಳು ಇದರ ಪಕ್ಕದಲ್ಲಿ ಇದೆ. ಪರಾಧೀನ ಸ್ವರಗಳು(ಐ, ಔ, ಋ) ಬಲ ಭಾಗದಲ್ಲಿ ಕಟ್ಟಕಡೆಯ ಕೋಲುಮಿನಲ್ಲಿ ಸಿಗುತ್ತವೆ. ಅಂಕಿಗಳು, ಚಿನ್ಹೆಗಳು ಮತ್ತು ಅಪರೂಪವಾಗಿ ಬಳಸುವ ಅಕ್ಷರಗಳು 'Shift' ಕೀ ಒತ್ತುವುದರಿಂದ ಕಾಣಿಸುತ್ತವೆ. ಆಂಗ್ಲ ಭಾಷೆಯಲ್ಲಿ ಪಠ್ಯವನ್ನು ನಮೂಧಿಸುವುದಕ್ಕೆ ತಾತ್ಕಾಲಿಕವಾಗಿ 'QWERTY' ಕೀಪ್ಯಾಡ್ ಕೂಡ ಉಪಯೋಗಿಸಬಹುದು.


ಸ್ವರಚಕ್ರ ಅಣುಸ್ತಾಪನ

  1. ಮೊದಲು ಮೇಲೆ ಇರುವ "Install" ಬಟನ್ ನಿಂದ "ಸ್ವರಚಕ್ರ ಕನ್ನಡ(Swarachakra Kannada)" ಇನ್‌ಸ್ಟಾಲ್ ಮಾಡಿಕೊಳ್ಳಿ.
  2. ಇದಾದ ನಂತರ ಕೀಬೋರ್ಡ್ ಅನ್ನು "ಎನೇಬಲ್" ಮಾಡಬೇಕು. ಇದ್ದಕ್ಕೆ "Settings" ಆರಿಸಿಕೊಂಡು "Language and Input" ಆರಿಸಿಕೊಳ್ಳಿ.
  3. ನಂತರ "Keyboard and Input methods" ಭಾಗದಲ್ಲಿ Swarachakra Kannada ಆರಿಸಿಕೊಳ್ಳಿ. ಅಂತ್ಯದಲ್ಲಿ "Keyboard and Input methods" ಭಾಗದಲ್ಲಿ "Defaults" ಮೇಲೆ ಕ್ಲಿಕ್ ಮಾಡಿ ಸ್ವರಚಕ್ರ ಕನ್ನಡ ವನ್ನು ಡಿಫಾಲ್ಟ್ ಕೀಬೋರ್ಡ್ ಆಗಿ ಆರಿಸಿಕೊಳ್ಳಿ. (ಕ್ಷಮಿಸಿ ಆಂಡ್ರಾಯ್ಡ್ ಸಾಫ್ಟ್‌ವೇರ್ ಹೀಗೆ ಕೆಲಸ ಮಾಡುತ್ತದೆ.)

ಗಮನವಿರಲಿ:ಸ್ವರಚಕ್ರ ANDROID 4.0(ICS) ಮತ್ತು ನಂತರದ ವರ್ಷನ್ಗಳಿಗೆ ಮಾತ್ರ ವಿನ್ಯಾಸ ಮಾಡಲಾಗಿದೆ. ಹಳೆಯ ವರ್ಷನ್ಗಳ ಮೇಲೆ ಇದು ಕೆಲಸ ಮಾಡುವುದಿಲ್ಲ ಏಕೆಂದರೆ ಅವುಗಳು UNICODEಗೆ ಬೆಂಬಲ ನೀಡುವುದಿಲ್ಲ.




Contact Us

For any queries and suggestions, contact us.